A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj

ನಾಗರಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ನಿಜವಾದ ಸ್ಥಳೀಯ ಮತ್ತು ನಗರ ಪ್ರಜಾಪ್ರಭುತ್ವದ ಅಗತ್ಯತೆಯ ಕುರಿತು ನಿರೂಪಕರಾದ ಪವನ್ ಶ್ರೀನಾಥ್‌ ಅವರ ಜೊತೆ ಮಾತನಾಡುತ್ತಾರೆ ಮತ್ತು ಮುಂಬರುವ 2022 ರ ಬಿಬಿಎಂಪಿ ಚುನಾವಣೆ ಸಂದರ್ಭ ತಮ್ಮ ಸ್ಥಳೀಯ ಕಾರ್ಪೊರೇಟರ್ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾಗರಿಕರು ಏನೆಲ್ಲಾ ಪ್ರಶ್ನೆ ಕೇಳಬೇಕು ಎಂದು ಚರ್ಚಿಸುತ್ತಾರೆ.

Changemaker, activist and civic leader Kathyayini Chamaraj talks to host Pavan Srinath about the need for true local and city democracy, and lays out what Bengaluru’s citizens should ask of their local corporator candidates in the upcoming 2022 BBMP elections.

*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!

'ನಾಗರಿಕ' ಎಂಬ ಪದವು 'ನಗರ'ಕ್ಕೆ ಸಂಭಂದ ಪಟ್ಟದ್ದು, ಇಂಗ್ಲಿಷ್ ನಲ್ಲೂ ಮತ್ತು ಕನ್ನಡದಲ್ಲೂ. ನಮ್ಮಲ್ಲಿ ಅನೇಕರು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ ಮತ್ತು ಮತದಾನ ಮಾಡುತ್ತೇವೆ. ಆದರೆ ಇದರಲ್ಲಿ ಕೆಲವೇ ಕೆಲವು ಜನರು ಮಾತ್ರ ನಗರ ಮತ್ತು ಸ್ಥಳೀಯ ಚುನಾವಣೆಗಳ ಬಗ್ಗೆಯೂ ಗಮನಹರಿಸುತ್ತಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ, ನಗರ ಚುನಾವಣೆಗಳಲ್ಲಿ ಮತದಾರರ ಜಾಗೃತಿ ಮತ್ತು ಇದರಿಂದಾಗಿ ಮತದಾನ ಮಾಡುವವರ ಸಂಖ್ಯೆ ಎರಡೂ ಕಡಿಮೆ ಇರುತ್ತೆ. ರಾಜ್ಯ ಸರ್ಕಾರಗಳು ಹೆಚ್ಚಿನ ಸ್ಥಳೀಯ ನಿರ್ಧಾರಗಳ ಮೇಲೆ ಅತಿಯಾದ ನಿಯಂತ್ರಣವನ್ನು ಹೊಂದಿದ್ದು ಇದರ ಪರಿಣಾಮವಾಗಿ ಬೆಂಗಳೂರಿನ ಬಿಬಿಎಂಪಿ ಚುನಾವಣೆ 2 ವರ್ಷದಿಂದ ನಡೆದಿಲ್ಲ. ಈವಾಗ ಅಂತಿಮವಾಗಿ ಜುಲೈ 2022 ರಲ್ಲಿ ಚುನಾವಣಾ ದಿನಾಂಕವನ್ನ ನಾವು ನಿರೀಕ್ಷಿಸುತ್ತಿದ್ದೇವೆ.

ಕಾತ್ಯಾಯಿನಿ ಚಾಮರಾಜ್ ಅವರು ಸುಮಾರು 35 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿ ಮತ್ತು ನಗರ ಆಡಳಿತದ ವಿಷಯಗಳ ಬಗ್ಗೆ ಬರೆಯುತ್ತಿದ್ದಾರೆ ಮತ್ತು ಅದರ ಕುರಿತು ಕೆಲಸ ಮಾಡುತ್ತಿದ್ದಾರೆ. 2005 ರಿಂದ CIVIC ನ ಕಾರ್ಯನಿರ್ವಾಹಕ ಟ್ರಸ್ಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 'ನಾಗರಿಕ ಸಮಾಜ ವೇದಿಕೆ'ಯ ನೇತ್ರತ್ವದಲ್ಲಿ ಕಾತ್ಯಾಯಿನಿ ಮತ್ತು ಅವರ ಸಂಗಡಿಗರು ಸೇರಿ 'BBMP ಚುನಾವಣೆ 2022 ರ ಪ್ರಣಾಳಿಕೆ'ಯನ್ನು ತಯಾರಿಸಿದ್ದು, ಇದನ್ನು ಜೂನ್‌ನಲ್ಲಿ ನಗರ ಮತ್ತು ಕರ್ನಾಟಕ ರಾಜ್ಯದ ಪ್ರಮುಖ ರಾಜಕೀಯ ನಾಯಕರನ್ನು ಒಳಗೊಂಡ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಾಯಿತು.

ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 143 ನೇ ಸಂಚಿಕೆಯಲ್ಲಿ ಕಾತ್ಯಾಯಿನಿಯವರು ಹೇಗೆ ಪ್ರಜಾಪ್ರಭುತ್ವವು ಚುನಾವಣೆಗಳೊಂದಿಗೆ ಕೊನೆಗೊಳ್ಳುವುದಿಲ್ಲ ಎಂದು, ಜೊತೆಗೆ ಜವಾಬ್ದಾರಿಗಳು, ಹೊಣೆಗಾರಿಕೆ ಮತ್ತು ಪಾರದರ್ಶಕತೆಯೊಂದಿಗೆ ನಡೆಯಬೇಕಾದ ಸಕ್ರಿಯ ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭೆಗಳ ಅಗತ್ಯತೆಗಳ ಕುರಿತೂ ತಿಳಿಸುತ್ತಾರೆ. ಅದರ ಜೊತೆಗೆ ಆಡಳಿತ ಅವಧಿಯಲ್ಲಿ ಹೇಗೆ ಊರಿನ ತಳಮಟ್ಟದ ನಾಗರಿಕರಿಗೂ ಕೂಡ ಅವರಿಗೆ ಅರ್ಹವಾದ ಸವಲತ್ತುಗಳು ಸಿಗುವಂತಾಗಬೇಕು ಎಂಬುವುದರ ಕುರಿತೂ ವಿಸ್ತ್ರತವಾಗಿ ಚರ್ಚಿಸಿದ್ದಾರೆ. ಬನ್ನಿ ಕೇಳಿ!

The word ‘citizen’ has always been connected to a ‘city’, in English and in Kannada. While many of us may actively vote and participate in state and national elections and politics, far fewer people stay connected in city and local politics. In a metropolis like Bengaluru, voter turnouts and voter awareness remains low during city elections. State governments also have excessive control over most local decisions, and as a result Bengaluru’s BBMP elections are overdue for 2 years now, and we can finally expect to learn the election dates in July 2022.

Kathyayini Chamaraj has been writing and working on Bengaluru’s development and urban governance issues for close to 35 years, and has been the Executive Trustee of CIVIC since 2005. As a part of a larger ‘Civil Society Forum’, Kathyayini and her collaborators have put together a ‘Manifesto for BBMP Elections 2022’, which was released in June in an event featuring top political leaders in the city and the state of Karnataka.

On Episode 143 of the Thale-Harate Kannada Podcast, Kathyayini explains how democracy doesn’t end with the elections, but needs active Ward Committees and Area Sabhas, with well-defined roles, responsibilities, accountability and transparency. She further details how Bengaluru needs to be governed such that its least fortunate citizens receive the focus and attention they deserve. Tune in!

Recommended Reading:

- Civil Society Forum BBMP manifesto with final inputs

- Manifesto Key Demands [English] [ಕನ್ನಡ]

- CIVIC, Bengaluru

- BBMP Elections: Will Bengaluru get a better deal? Kathyayini Chamaraj in Deccan Herald

More Bengaluru-related Episodes:

- ಬೆಂಗಳೂರಿಗೊಂದು ಬಜೆಟ್. A Budget for Bengaluru? (2021) with Surya and Pavan.

- ಬೆಂಗಳೂರಿಗೆ ನೀರಿದೆಯೇ? Water and Bengaluru with S Vishwanath.

- ಬೆಂಗಳೂರಿನ ಪ್ಲ್ಯಾನಿಂಗ್ ಸಾಧ್ಯವಾ? Bengaluru's City Planning with Dr Anjali Karol Mohan.

More Development-related Episodes:

- ಸಾರ್ವಜನಿಕ ಎಂದರೆ ಯಾರು? The Public in Public Policy with Dr Ashwin Mahesh.

- ವೃದ್ಧಿ-ವಿತ್ತ-ವೃತ್ತಿ. A Vision for India's Development with Dr R Balasubramaniam.

- ಗಣರಾಜ್ಯ ಚಿಂತನೆಗಳು. Reflections on the Republic with Alok Prasanna Kumar.

- ಗ್ರಾಮಗಳು ಪ್ರಜಾಪ್ರಭುತ್ವದ ಯಶಸ್ಸು. Gram Sabhas & Democracy with Dr Vijayendra Rao.

- ಕುಶಲ ಭಾರತ. Skilling & New Education Policy with Dr KP Krishnan.

- ತ್ಯಾಜ್ಯ ನೀರಿನ ಗಮನ. Managing Waste Water in India with S Vishwanath.

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ , Instagram: https://instagram.com/haratepod/ and YouTube: https://youtube.com/HaratePod .

ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app.

We also have some video episodes up on YouTube! ಬನ್ನಿ ಕೇಳಿ!

2356 232